Monday, August 5, 2013

ಡಾಕ್ಟರ್ ನುಡಿದರು "ನಾನು ಮುಂಚಿನಿಂದಲೂ ಎಚ್ಚರಿಕೆ ಕೊಟ್ಟರೂ ನೀವು ಅದನ್ನು ಉಲ್ಲಂಘಿಸಿದರ ಪರಿಣಾಮವೇ ಇಂದು ನಿಮಗೆ ಬಂದಿರುವ ಈ ಸ್ಥೂಲ ಶರೀರ ... ನನ್ನ ಬಳಿ ಇನ್ನೊಬ್ಬರು ಪೇಷಂಟ್ ಇದ್ದರು. ಅವರಿಗಾದಂತೆಯೇ ನಿಮಗೂ ಆಗಿದೆ. ಕೂತ ಕಡೆ ಕೂತಿರಬೇಕು. ಎದ್ದು ಓಡಾಡಲೂ ಇನ್ನೊಬ್ಬರ ಸಹಾಯ ಬೇಕು. ನಿತ್ಯಕರ್ಮಗಳಿಗೂ ಇನ್ನೊಬ್ಬರನ್ನು ಆಶ್ರಯ. ಮೈಮೇಲೆ ಹರಿದ ನೀರು ಪಾದ ಸೇರಿದೆಯೋ ಇಲ್ಲವೋ ತಿಳಿಯದಂತೆ ಮುಂದೆ ಬಂದ ಹೊಟ್ಟೆ. ಕಾಲುಗಳನ್ನು ಸೋಪುಜ್ಜಿ ತೊಳೆಯಲಾಗದಂತೆ ಅತಿ ದೊಡ್ಡದಾದ ದೇಹ ... ಹೀಗೆ ..."

ಪೇಷಂಟ್ "ಅಯ್ಯೋ ಡಾಕ್ಟ್ರೇ ... ಮಹಾ ತಪ್ಪಾಯ್ತು ... ನನಗೊಂದು ಪರಿಹಾರ ಹೇಳಿ .. ಆ ಇನ್ನೊಬ್ಬರು ಪೇಷಂಟ್ ಈಗ ಹೇಗಿದ್ದಾರೆ? ಅವರ ಆರೋಗ್ಯ ಹೇಗಿದೆ?"

ಡಾಕ್ಟರ್ "ಅವರ ಕೆಲಸ ಅವರು ಮಾಡಿಕೊಳ್ಳಲು ಯಾವಾಗ ಆಗುವುದಿಲ್ಲ ಎಂದು ತಿಳಿಯಿತೋ ಆಗ ಅವರೊಂದು ಮಠ ತೆರೆದರು ... ಅವರ ಕೆಲಸಗಳನ್ನು ಅವರ ಭಕ್ತವೃಂದ ಶ್ರದ್ದೆಯಿಂದ ಮಾಡುತ್ತಿದ್ದಾರೆ"


No comments:

Post a Comment